ಜನ್ಮಭೂಮಿ 2 - 
ಗುಜರಾತ್ ರಾಜ್ಯದಲ್ಲಿ ಅಧಿಕ ಪ್ರಸಾರ ಹೊಂದಿರುವ ಗುಜರಾತಿ ಪತ್ರಿಕೆ. ಮುಂಬಯಿಯಿಂದ ಪ್ರಕಟವಾಗುತ್ತದೆ. 1934ರಲ್ಲಿ ಅಮೃತಲಾಲ್ ಸೇಠ್ ಇದನ್ನು ಆರಂಭಿಸಿದರು. ಅನಂತರ ಶ್ಯಾಮಲದಾಸ್ ಗಾಂಧಿಯವರ ಸಂಪಾದಕತ್ವದಲ್ಲಿ ಪತ್ರಿಕೆ ಖ್ಯಾತಿ ಗಳಿಸಿತು. ಗಾಂಧಿಯವರು ಈ ಪತ್ರಿಕೆಯನ್ನು ಬಿಟ್ಟು ಹೊಸದೊಂದು ಪತ್ರಿಕೆ ಹೊರಡಿಸಿದಾಗ ಸೇಠರು ಪತ್ರಿಕೆಯನ್ನು ಮುಂದುವರಿಸಿದರು. ಈ ಪತ್ರಿಕೆಯೂ ಅವರು ನಡೆಸುತ್ತ್ತಿದ್ದ ಇತರ ಪತ್ರಿಕೆಗಳೂ ಗಾಂಧಿಯವರ ಧೋರಣೆಗಳನ್ನೂ ವಿಧಾನಗಳನ್ನೂ ಈ ಪತ್ರಿಕೆಗಳು ಬೆಂಬಲಿಸುತ್ತಿದ್ದವು.

ಈಗ ಮೋಹನಲಾಲ್ ವಿ. ಮೆಹ್ತಾ ಇದರ ಸಂಪಾದಕರಾಗಿದ್ದಾರೆ. ಬೆಲೆ 15 ಪೈಸೆ. ಪ್ರಸಾರ 43,564 (1970).	
										(ಎಸ್.ಎಲ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ